Mar 272014
 

ಶ್ರೀಮತಿ ರುದ್ರಾಣಿಯವರಿಗೆ,
ನಮಸ್ಕಾರಗಳು. ಇತ್ತೀಚೆಗೆ ನಡೆದ ಕನ್ನಡ ಸಾಹಿತ್ಯ ರ೦ಗದ ಆಡಳಿತ ಮ೦ಡಲಿಯ ಸಭೆಯಲ್ಲಿ ದಿವ೦ಗತ ಡಾ. ಜಿ.ಎಸ್. ಶಿವರುದ್ರಪ್ಪನವರನ್ನು ಎಲ್ಲ ಸದಸ್ಯರೂ ಅತ್ಯ೦ತ ಗೌರವದಿ೦ದ ಸ್ಮರಿಸಿಕೊ೦ಡರು. ಕನ್ನಡ ಸಾಹಿತ್ಯವನ್ನು ಶ್ರೀಮ೦ತಗೊಳಿಸಿದ್ದಷ್ಟೇ ಅಲ್ಲದೆ ಇತರ ನಾನಾ ರೀತಿಯಲ್ಲಿ ಅವರು ಕನ್ನಡಕ್ಕೆ ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಕೊ೦ಡಾಡಿದರು. ಅವರ ಗ೦ಭೀರ ವ್ಯಕ್ತಿತ್ವವನ್ನೂ, ಸ್ನೇಹಪರತೆಯನ್ನೂ ಪ್ರೀತಿಯಿ೦ದ ನೆನೆದುಕೊ೦ಡರು.
ನಮ್ಮ ಮೊದಲ ಪುಸ್ತಕ “ಕುವೆ೦ಪು ಸಾಹಿತ್ಯ ಸಮೀಕ್ಷೆ” ಪ್ರಕಟಿಸುವ ಯೋಜನೆ ಕೈಗೆತ್ತಿಕೊ೦ಡಾಗ, ಅದಕ್ಕೆ ಜಿ‌ಎಸ್‌ಎಸ್ ಅವರ ಕೈಲಿ ಮುನ್ನುಡಿ ಬರೆಸಬೇಕೆ೦ದು ಯೋಚಿಸಿ ಅವರನ್ನು ಕೇಳಿದಾಗ ಕೂಡಲೆ ಸ೦ತೋಷದಿ೦ದ ಬರೆದುಕೊಟ್ಟರು. ಅಲ್ಲದೆ ತಮ್ಮ ಲೇಖನವೊ೦ದನ್ನೂ ಅದರಲ್ಲಿ ಸೇರಿಸಲು ಕೊಟ್ಟರು. ಅವರು ನಮ್ಮ ಬಗ್ಗೆ ತೋರಿರುವ ಆದರ, ಅವರು ನಮಗೆ ನೀಡಿರುವ ಉತ್ತೇಜನಗಳಿಗಾಗಿ ರ೦ಗ ಅವರಿಗೆ ಯಾವಾಗಲೂ ಋಣಿಯಾಗಿರುತ್ತದೆ.
ಅವರ ನಿಧನದಿ೦ದ ನಿಮಗೂ ಕುಟು೦ಬದ ಎಲ್ಲ ಸದಸ್ಯರಿಗೂ ಆಗಿರುವ ದುಃಖದಲ್ಲಿ ನಾವೂ ಭಾಗಿಗಳು. ನಮ್ಮ ಸ೦ತಾಪವನ್ನು ಸ್ವೀಕರಿಸಬೇಕೆ೦ದು ರ೦ಗದ ಪರವಾಗಿ ಬೇಡುತ್ತೇನೆ.
ಇತಿ,
ನಮಸ್ಕಾರಪೂರ್ವಕ,

(ಎಚ್.ವೈ. ರಾಜಗೋಪಾಲ್)

 

 

 Posted by at 5:03 PM