Nov 102020
 
ಕನ್ನಡ ಸಾಹಿತ್ಯ ರಂಗದ ಉಪನ್ಯಾಸ ಮಾಲಿಕೆ – 1
ಎಲ್ಲರಿಗೂ ನಮಸ್ಕಾರ. ಕನ್ನಡ ರಾಜ್ಯೋತ್ಸವ ಮತ್ತು ಬರಲಿರುವ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಇದೊಂದು ಸಂತೋಷದ ಸುದ್ದಿ. ಕನ್ನಡ ಸಾಹಿತ್ಯ ರಂಗವು ಅಂತರ್ಜಾಲದ ಮೂಲಕ ಉಪನ್ಯಾಸ ಮಾಲಿಕೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಖ್ಯಾತ ಕವಿ, ಲೇಖಕ, ವಿದ್ವಾಂಸರಿಂದ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಉಪನ್ಯಾಸಗಳಿರುತ್ತವೆ. ಉಪನ್ಯಾಸಕರ ಲಭ್ಯತೆ, ನಮ್ಮ ಸಮಯಾನುಕೂಲಗಳನ್ನು ಆಧರಿಸಿ, ಆಗಿಂದಾಗ್ಗೆ ಈ ಉಪನ್ಯಾಸಗಳನ್ನು ನಡೆಸುವ ಇರಾದೆ ನಮಗಿದೆ.
ಈ ನಿಟ್ಟಿನಲ್ಲಿ, ನಮ್ಮ ಮೊದಲ ಕಾರ್ಯಕ್ರಮವಾಗಿ, ನವೆಂಬರ್ 27ರ ಶುಕ್ರವಾರ, ಶತಾವಧಾನಿ ಆರ್. ಗಣೇಶ್ ಅವರು ‘ಪುತಿನ’ ಅವರ ‘ಗೋಕುಲ ನಿರ್ಗಮನ’ ದ ಕುರಿತು ಉಪನ್ಯಾಸ ನೀಡಲಿದ್ದಾರೆ.
Virtual Event/ YouTube live
(Date and Time: November, 27th Friday ( 9.00-10.00 PM (IST)10.30-11.30 AM (EST) 9.30-10.30AM (CST)7.30- 8.30AM(PST)
ಈ ಉಪನ್ಯಾಸಗಳು ಜೂಮ್ ಮೂಲಕ ನಡೆಯಲಿದ್ದು, ಯೂಟ್ಯೂಬ್ನಲ್ಲಿ ನೇರಪ್ರಸಾರವಿರುತ್ತದೆ. ಈ ಉಪನ್ಯಾಸಗಳನ್ನು ಪ್ರಾಯೋಜಿಸುವ ಮೂಲಕ ನೀವೂ ಕೂಡ ಕಸಾರಂನೊಂದಿಗೆ ಕೈಜೋಡಿಸಬಹುದು.
ಹೆಚ್ಚಿನ ವಿವರಗಳಿಗೆ/ಉಪನ್ಯಾಸಗಳನ್ನು ಪ್ರಾಯೋಜಿಸಲು ಸಂಪರ್ಕಿಸಿ:
– ಕನ್ನಡ ಸಾಹಿತ್ಯ ರಂಗ
 Posted by at 9:22 AM

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)