Apr 162019
 
ಕನ್ನಡ ಸಾಹಿತ್ಯ ರ೦ಗದ  ಒಂಭತ್ತನೆಯ ವಸಂತ ಸಾಹಿತ್ಯೋತ್ಸವ
ಆತ್ಮೀಯರೆ,
ಅಮೆರಿಕದ ಏಕೈಕ ರಾಷ್ಟ್ರೀಯ ಕನ್ನಡ ಸಾಹಿತ್ಯ ಸ೦ಸ್ಥೆ `ಕನ್ನಡ ಸಾಹಿತ್ಯ ರ೦ಗ’ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ‘ವಸಂತ ಸಾಹಿತ್ಯೋತ್ಸವ’ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಸಾಹಿತ್ಯಾಸಕ್ತರಿಗೆಲ್ಲ ಚಿರಪರಿಚಿತ. ಕಸಾರಂ ಈಗಾಗಲೇ ಎಂಟು ಸಾಹಿತ್ಯ ಸಮ್ಮೇಳನಗಳನ್ನು ಅಮೆರಿಕಾದ ವಿವಿದೆಡೆಗಳಲ್ಲಿ ಯಶಸ್ವಿಯಾಗಿ ನಡೆಸಿ ಈ ವರ್ಷ ಒಂಭತ್ತನೆಯ ಸಮ್ಮೇಳನವನ್ನು ನಡೆಸಲು ಸಿದ್ಧವಾಗಿದೆ. ಇದೇ ಮೇ ೧೮-೧೯ರಂದು ನ್ಯೂ ಜೆರ್ಸಿಯಲ್ಲಿ `ತ್ರಿವೇಣಿ’ ಕನ್ನಡ ಕೂಟದ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದೆ. ಕನ್ನಡದ ಪ್ರಸಿದ್ಧ ಲೇಖಕ, ಪ್ರಕಾಶಕ ವಸುಧೇಂದ್ರ ಅವರು ಈ ಸಮ್ಮೇಳನದ ಮುಖ್ಯ ಅಥಿತಿಯಾಗಿ ಆಗಮಿಸಲಿದ್ದಾರೆ.  ಹೆಚ್ಚಿನ ವಿವರಗಳಿಗೆ www.kannadasahityaranga.org ತಾಣವನ್ನು ನೋಡಿ.
ಈ ಸಮ್ಮೇಳನದಲ್ಲಿ ಪ್ರತಿಬಾರಿಯಂತೆ ಈ ಸಲವೂ ಅಮೆರಿಕದ ಕನ್ನಡ ಬರಹಗಾರರನ್ನು ಮತ್ತು ಅವರ ಇತ್ತೀಚಿನ ಕೃತಿಗಳನ್ನು ‘ನಮ್ಮ ಹೆಮ್ಮೆಯ ಬರಹಗಾರರು’ ಕಾರ್ಯಕ್ರಮದಲ್ಲಿ ಸಾಹಿತ್ಯಪ್ರಿಯರಿಗೆ  ಪರಿಚಯ ಮಾಡಿಕೊಡಲು ನಾವು ಉತ್ಸುಕರಾಗಿದ್ದೇವೆ.  ಲೇಖಕರು ತಮ್ಮ ಹೊಸ ಪುಸ್ತಕಗಳನ್ನು ಇಲ್ಲಿ ಬಿಡುಗಡೆ ಮಾಡುವ ಅವಕಾಶವೂ ಉಂಟು.
ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಹೀಗಿವೆ:
– ಕನ್ನಡದ ಪುಸ್ತಕಗಳನ್ನು ಮಾತ್ರ ಪರಿಗಣಿಸಲಾಗುವುದು. ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಪುಸ್ತಕಗಳೂ ಆಗಬಹುದು.  ಪುಸ್ತಕವು ಸಾಹಿತ್ಯ, ವಿಜ್ಞಾನ, ಪರಿಸರ, ಆರೋಗ್ಯ, ಅನುವಾದ, ಮಕ್ಕಳ ಸಾಹಿತ್ಯ.. ಹೀಗೆ ಯಾವುದೇ ಪ್ರಕಾರಕ್ಕೂ ಸೇರಿದ್ದಾಗಿರಬಹುದು.
– ಪುಸ್ತಕಗಳು ೨೦೧೭ರ ಏಪ್ರಿಲ್  ತಿಂಗಳ ನಂತರ ಪ್ರಕಟಗೊಂಡಿದ್ದಾಗಿರಬೇಕು.
– ಈ ಮೊದಲು ಅಮೆರಿಕದಲ್ಲಿ ಎಲ್ಲಿಯೂ ಬಿಡುಗಡೆಯಾಗಿರದ ಪುಸ್ತಕಗಳನ್ನು ಮಾತ್ರ ಸಮ್ಮೇಳನದಲ್ಲಿ  ಬಿಡುಗಡೆಗೆ ಮಾಡುವ ಅವಕಾಶ ಒದಗಿಸಲಾಗುವುದು.
– ಪುಸ್ತಕಗಳ ಬಿಡುಗಡೆ ಮತ್ತು ಪರಿಚಯವನ್ನು ಅಪೇಕ್ಷಿಸುವ ಲೇಖಕರು ಮತ್ತು ಪುಸ್ತಕವನ್ನು ಕಾರ್ಯಕ್ರಮದಲ್ಲಿ ಪರಿಚಯಿಸುವವರು  ಸಮ್ಮೇಳನಕ್ಕೆ ನೊಂದಾಯಿಸಿಕೊಂಡು,  ಉಪಸ್ಥಿತರಿರಬೇಕು.
– ಪುಸ್ತಕ ಬಿಡುಗಡೆ/ಪರಿಚಯದ ಆಯ್ಕೆಯಲ್ಲಿ ಕಸಾರಂ ತೀರ್ಮಾನ ಅಂತಿಮ.
– ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಲೇಖಕರು ಏಪ್ರಿಲ್ 25ರ ಒಳಗೆ  ನಮ್ಮನ್ನು ಸಂಪರ್ಕಿಸಿ, ನಿಮ್ಮ ಕೃತಿಗಳ ಒಂದು ಕಾಪಿಯನ್ನು ಪುಸ್ತಕ ಪರಿಚಯ ಮಾಡಿಕೊಡುವವರಿಗೂ ಇನ್ನೊಂದು ಕಾಪಿಯನ್ನು ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವ ಮೀರಾ ರಾಜಗೋಪಾಲ್ ಅವರಿಗೂ ಕಳುಹಿಸಿಕೊಡಬೇಕು. 
– ಪರಿಚಯಿಸಲ್ಪಟ್ಟ ಪುಸ್ತಕಗಳನ್ನು ಕಸಾರಂ ಪುಸ್ತಕ ಮಳಿಗೆಯಲ್ಲಿ ಮೇ ೧೮-೧೯ರಂದು ಮಾರಲು ಅವಕಾಶವಿರುತ್ತದೆ.
-ಪುಸ್ತಕಗಳನ್ನು ಮಾರುವ ಜವಾಬ್ದಾರಿ ಲೇಖಕರಿಗೇ ಸೇರಿದ್ದು.
ಮಳಿಗೆಯಲ್ಲಿ ಇತರ ಲೇಖಕರಿಗೆ ಮತ್ತು ಕಾರ್ಯಕ್ರಮಕ್ಕೆ ತೊಂದರೆಯಾಗದ ರೀತಿಯಲ್ಲಿ ಮಾರಾಟ ನಡೆಸಬೇಕು.
ಹೆಚ್ಚಿನ ವಿವರಗಳಿಗೆ ಮೀರಾ ರಾಜಗೋಪಲ್ ಅವರನ್ನು ಸಂಪರ್ಕಿಸಿ
– ಸಂಪರ್ಕ ವಿಳಾಸ bhameera@gmail.com
ಕನ್ನಡ ಸಾಹಿತ್ಯಾಸಕ್ತರು ಹೆಚ್ಚಿನ ಸ೦ಖ್ಯೆಯಲ್ಲಿ ‘ವಸಂತ ಸಾಹಿತ್ಯೋತ್ಸವ’ದಲ್ಲಿ ಪಾಲ್ಗೊಂಡು ಸಮ್ಮೇಳನದ ಸಂಭ್ರಮ ಹೆಚ್ಚಿಸಬೇಕೆಂದು ಕೋರುತ್ತಿದ್ದೇವೆ.
ಈ ಕುರಿತಂತೆ ಹೆಚ್ಚಿನ ವಿವರಗಳು ಬೇಕಿದ್ದರೆ ದಯವಿಟ್ಟು ನಮ್ಮನ್ನು ಸ೦ಪರ್ಕಿಸಿ.
ವಿಶ್ವಾಸಪೂರ್ವಕವಾಗಿ,
ಕನ್ನಡ ಸಾಹಿತ್ಯ ರಂಗ
 Posted by at 7:33 PM