Jun 162009
 

ಇದು, ಕನ್ನಡವನ್ನು ಶಾಸ್ತ್ರೀಯಭಾಷೆಯೆಂದು ಗುರುತಿಸಿರುವ ಸನ್ನಿವೇಶ. ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿಗಳ ಪಾರಂಪರಿಕ ನೆಲೆಗಳನ್ನು ಕುರಿತ ತಿಳಿವಳಿಕೆಯನ್ನು, ಆಸಕ್ತರಾದವರಿಗೆ ತಲುಪಿಸುವುದು ಇಂದಿನ ಅಗತ್ಯ ಇಂತಹ ಅಗತ್ಯಗಳನ್ನು ಪೂರೈಸಲೆಂದು ಈ ವಿದ್ಯುನ್ಮಾನ ತಾಣವು (ವೆಬ್ ಸೈಟ್) ರೂಪಿತವಾಗಿದೆ. ಇದು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲಿಯೂ ಇರುವ ಮಾಹಿತಿ ತಾಣ. ಕನ್ನಡ ಭಾಷೆಯನ್ನು ತಿಳಿಯದವರಿಗಾಗಿ ಇಂಗ್ಲಿಷಿನಲ್ಲಿಯೂ ಮತ್ತು ಕನ್ನಡ ಬಂದರೂ ಸಂಸ್ಕೃತಿ-ಸಾಹಿತ್ಯಗಳಲ್ಲಿ ಪರಿಣಿತರಲ್ಲದವರಿಗಾಗಿ ಕನ್ನಡದಲ್ಲಿಯೂ ಈ ವೆಬ್ ಸೈಟ್ ಅನ್ನು ರೂಪಿಸಲಾಗಿದೆ. ಆದ್ದರಿಂದ ಮಾಹಿತಿ ಮತ್ತು ವಿಶ್ಲೇಷಣೆಗಳು ಇಲ್ಲಿನ ಮೂಲ ನೆಲೆಗಳು. ಕನ್ನಡದಲ್ಲಿ ನಡೆದಿರುವ ಕೆಲಸವನ್ನು ಅನ್ಯಭಾಷೆಗಳವರಿಗೆ ಮತ್ತು ಅವರು ನಮ್ಮ ನಾಡು-ನುಡಿಗಳ ಬಗ್ಗೆ ಮಾಡಿರುವ ಕೆಲಸವನ್ನು ಕನ್ನಡ ಬಲ್ಲವರಿಗೆ ತಲುಪಿಸುವುದೂ ನಮ್ಮ ಆಶಯವಾಗಿದೆ. ಕರ್ನಾಟಕದ ಬಹುಭಾಷಿಕ ಮತ್ತು ಬಹುಸಾಂಸ್ಕೃತಿಕ ಆಯಾಮಗಳನ್ನು ಇಲ್ಲಿ ಗಮನಿಸಲಾಗಿದೆ.

ಈ ವೆಬ್ ಸೈಟ್ ನಲ್ಲಿ ಭಾಷೆ, ಸಾಹಿತ್ಯ, ಶಾಸನಗಳು, ಕಲೆಗಳು ಮತ್ತು ವಾಸ್ತುಶಿಲ್ಪ, ಜಾನಪದ ಮತ್ತು ಜನಪದ ಕಲೆಗಳು, ಪಾರಂಪರಿಕ ಜ್ಞಾನದ ಆಕರಗಳು, ಸಂಶೋಧಕರು, ಪ್ರಮುಖ ಸ್ಥಳಗಳು, ಧರ್ಮಗಳು, ಕರ್ನಾಟಕ ಅಧ್ಯಯನಗಳು ಮತ್ತು ನಾಡು, ನುಡಿ ಹಾಗೂ ಪ್ರಮುಖ ವ್ಯಕ್ತಿಗಳು ಎಂಬ ಹನ್ನೊಂದು ವಿಭಾಗಗಳಲ್ಲಿ ವಿಷಯಗಳನ್ನು ವಿಂಗಡಿಸಲಾಗಿದೆ. ಪ್ರತಿಯೊಂದು ನಮೂದಿಗೂ, ಪೂರಕವಾದ ಅಧ್ಯಯನ ಸಾಮಗ್ರಿಯನ್ನು ಸೂಚಿಸಲಾಗಿದೆ. ಅಗತ್ಯವಿರುವ ನಮೂದುಗಳಿಗೆ ದೃಶ್ಯ ಹಾಗೂ ಶ್ರವ್ಯರೂಪದ ಮಾಹಿತಿಗಳನ್ನೂ ಒದಗಿಸಲಾಗುತ್ತದೆ. ಒಂದು ನಮೂದನ್ನು ಓದುವಾಗ ಸಂಬಂಧಿಸಿದ ಇತರ ನಮೂದುಗಳಿಗೂ ಲಿಂಕ್ ಅನ್ನು ಒದಗಿಸಲಾಗಿದೆ. ಈ ತಾಣದಲ್ಲಿ ಹದಿನೇಳನೆಯ ಶತಮಾನದ ಕೊನೆಯವರೆಗಿನ ಆಗುಹೋಗುಗಳಿಗೆ ಒತ್ತು ಕೊಡಲಾಗಿದೆ. ಅನಂತರದ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿದ್ಯಮಾನಗಳು ಹೊಸ ದಿಕ್ಕನ್ನು ಹಿಡಿದವೆನ್ನುವುದು ಇಲ್ಲಿನ ಗ್ರಹಿಕೆ. ಹೊಸಗನ್ನಡದ ಬಳಕೆಯೂ ಸರಿಸುಮಾರು ಆಗಲೇ ಮೊದಲಾಯಿತು.  ಇದು ನಿರಂತರವಾಗಿ ಬೆಳೆಯುವ ತಾಣ. ಹೊಸ ನಮೂದುಗಳನ್ನು ಸೇರಿಸಲು, ಇರುವ ನಮೂದುಗಳಿಗೆ ಹೊಸ ಮಾಹಿತಿಯನ್ನು ಸೇರಿಸಲು, ಅರೆ-ಕೊರೆಗಳನ್ನು ಸರಿಪಡಿಸಿಕೊಳ್ಳಲು ಸದಾ ಅವಕಾಶವಿರುತ್ತದೆ. ಈ ತಾಣವನ್ನು ಉಪಯೋಗಿಸುವವರ ಪ್ರತಿಕ್ರಿಯೆಗಳು ಕೂಡ ಇದು ಇನ್ನಷ್ಟು ಒಪ್ಪವಾಗಲು ನೆರವಾಗುತ್ತದೆ. ಕರ್ನಾಟಕವನ್ನು ಕುರಿತು ತಿಳಿಯಲು ಬಯಸುವ ಎಲ್ಲ ಆಸಕ್ತರಿಗೂ ಇದು ಉಪಯುಕ್ತವಾದ ತಾಣವಾಗುವುದೆಂದು ನಮ್ಮ ನಂಬಿಕೆ.

ಈ ತಾಣವು ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥಾನದಲ್ಲಿ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್) ರೂಪಿತವಾಗಿದೆ. ಕರ್ನಾಟಕದ ಹಿರಿಯ ವಿದ್ವಾಂಸರಾದ ಪ್ರೊ. ಎಂ. ಚಿದಾನಂದಮೂರ್ತಿ,  ಪ್ರೊ. ಎಂ.ಎಂ. ಕಲಬುರ್ಗಿ, ಪ್ರೊ. ಟಿ.ವಿ. ವೆಂಕಟಾಚಲಶಾಸ್ತ್ರೀ, ಪ್ರೊ. ಕೆ.ವಿ.ನಾರಾಯಣ ಮತ್ತು ಡಾ. ಎನ್.ಎಸ್. ತಾರಾನಾಥ ಅವರು ಸದಸ್ಯರಾಗಿರುವ ಸಲಹಾ ಸಮಿತಿಯು ಈ ಯೋಜನೆಯ ಹೊಳಹು ಹಾಕಿತು. ಭಾಷಾಸಂಸ್ಥಾನದ ನಿರ್ದೇಶಕರಾದ ಪ್ರೊ. ಉದಯನಾರಾಯಣಸಿಂಗ್ ಮತ್ತು ಪ್ರೊ. ಕೆ.ವಿ. ನಾರಾಯಣ ಅವರು ಸಲಹೆಗಾರರಾಗಿ ಅಮೂಲ್ಯ ಸೂಚನೆಗಳನ್ನು ನೀಡಿದ್ದಾರೆ. ಈ ಯೋಜನೆಗೆ ಶ್ರೀ ಲಿಂಗದೇವರು ಹಳೇಮನೆಯವರು ಶೈಕ್ಷಣಿಕ ಸಂಯೋಜಕರಾಗಿಯೂ ಡಾ. ಮಲ್ಲಿಕಾರ್ಜುನ ಅವರು ತಾಂತ್ರಿಕ ಸಂಯೋಜಕ ನಿರ್ದೇಶಕರಾಗಿಯೂ ದುಡಿದಿದ್ದಾರೆ. ಪ್ರೊ. ಎಚ್.ಎಸ್. ರಾಘವೇಂದ್ರರಾವ್ ಅವರು ಈ ಯೋಜನೆಯ ಸಂಪನ್ಮೂಲ ವ್ಯಕ್ತಿಗಳು. ಶ್ರೀಮತಿ ಸುನೀತಾ ರಾಜೇಂದ್ರ, ಶ್ರೀ ಕೆ.ಎನ್. ಅಶೋಕ್ ಮತ್ತು ಶ್ರೀ ಕೇಶವಮೂರ್ತಿಯವರು ಅಗತ್ಯವಾದ ತಾಂತ್ರಿಕ ನೆರವನ್ನು ನೀಡಿದ್ದಾರೆ. ಈಗ ಆಂಶಿಕವಾಗಿ ಬಿಡುಗಡೆಯಾಗುತ್ತಿರುವ ಈ ವೆಬ್ ಸೈಟ್ ಅನತಿಕಾಲದಲ್ಲಿಯೇ ಪೂರ್ಣಪ್ರಮಾಣವನ್ನು ಪಡೆಯಲಿದೆ.

 Posted by at 7:09 PM
Jun 072009
 

ಅಮೇರಿಕಾದಂಬರಿ  

ಅಮೇರಿಕನ್ನಡಿಗರ ಸಾಹಿತ್ಯಪ್ರೇಮ ಬ್ಲಾಗ್‌ಗಳ ಮೂಲಕ ವೆಬ್‌ ಸೈಟ್‌ಗಳ ಮೂಲಕ ಇತ್ತೀಚೆಗೆ ಹೆಚ್ಚು ವ್ಯಕ್ತವಾಗುತ್ತಿದ್ದರೂ ಪ್ರಾರಂಭದಿಂದಲೂ ಕೃತಿಗಳ ಮೂಲಕವೂ ವ್ಯಕ್ತವಾಗುತ್ತಿದೆ. ಅಂಥ ಬರಹಗಾರರ ಮೆಚ್ಚತಕ್ಕ ಎರಡು ಪ್ರಮುಖ ವಿಷಯಗಳೆಂದರೆ ತಮ್ಮ ಮಾತೃಭಾಷೆ ಬರೆವಣಿಗೆಯನ್ನು ಉಳಿಸಿಕೊಳ್ಳುವ ತಹತಹ ಮತ್ತು ಅಕ್ಷರ ಅವರಿಗೆ ಅನಿವಾರ್ಯವಲ್ಲದಿದ್ದರೂ ಅನಿವಾರ್ಯ ಮಾಡಿಕೊಂಡು ಬರೆಯುವ ಅಕ್ಷರ ಶ್ರದ್ಧೆ. ಇದೀಗ ಅಂಥ ಶ್ರದ್ಧೆಗೆ ಇನ್ನೊಂದು ಉದಾಹರಣೆ ಸಿಗುತ್ತಿದೆ. ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ವಸಂತ ಸಾಹಿತ್ಯೋತ್ಸವದಲ್ಲಿ ಭಾನುವಾರ (ಮೇ ೩೧) ‘ಕನ್ನಡ ಕಾದಂಬರಿ ಲೋಕದಲ್ಲಿ…ಹೀಗೆ ಹಲವು’ ಎಂಬ ವಿಮರ್ಶಾ ಕೃತಿ ಬಿಡುಗಡೆಯಾಗುತ್ತಿದೆ. ಇದೊಂದು ಆಸಕ್ತಿಯ ಸಂಕಲನ. ಕನ್ನಡದ ಬಹುಚರ್ಚೆಯ ಅನೇಕ ಕಾದಂಬರಿಗಳನ್ನು ಇಲ್ಲಿ ಅಮೇರಿಕನ್ನಡಿಗ ಅಕ್ಷರ ಪ್ರೇಮಿಗಳು ವಿಮರ್ಶಿಸಿದ್ದಾರೆ. ಎಸ್‌. ಎಲ್‌. ಬೈರಪ್ಪ ಅವರ ‘ಮಂದ್ರ’ದಿಂದ ಹಿಡಿದು ಇತ್ತೀಚಿನ ಜೋಗಿ ಅವರ ‘ಯಾಮಿನಿ’ವರೆಗೆ ಬೇರೆ ಬೇರೆ ತಲೆಮಾರಿನ ಲೇಖಕರನ್ನು ಅವರ ನಿರ್ದಿಷ್ಟ ಕೃತಿಯ ಜಾಡಲ್ಲಿ ವಿಮರ್ಶೆ ಮಾಡಲಾಗಿದೆ. ಕುಂವೀ ಅವರ ‘ಅರಮನೆ’, ಚಂದ್ರಶೇಖರ ಕಂಬಾರರ ‘ಶಿಖರಸೂರ್ಯ’, ವೈದ್ಯರ ‘ಹಳ್ಳ ಬಂತು ಹಳ್ಳ’, ದೇವನೂರರ ‘ಕುಸುಮಬಾಲೆ’ ಮೊದಲಾದ ಕೃತಿಗಳನ್ನು ಸ್ವಲ್ಪ ಅಧ್ಯಯನದೊಂದಿಗೆ ವಿಮರ್ಶಿಸಿರುವುದು ಕಾಣುತ್ತದೆ. ವಿಮರ್ಶಾ ಕೃತಿಗಳ ಮಾಮೂಲಿ ಸೂತ್ರಗಳನ್ನೂ ಮೀರಿದ ಪ್ರಾಮಾಣಿಕ ಅನಿಸಿಕೆ, ಅಭಿಪ್ರಾಯ ಹಂಚಿಕೆ ಇಲ್ಲಿನ ಲೇಖನಗಳಿಗಿರುಮದು ಗಮನಾರ್ಹ.

(ಕನ್ನಡ ಕಾದಂಬರಿ ಲೋಕದಲ್ಲಿ… ಹೀಗೆ ಹಲವು ; ಸಂ: ಮೈ.ಶ್ರೀ. ನಟರಾಜ ; ಕನ್ನಡ ಸಾಹಿತ್ಯ ರಂಗ ಮತ್ತು ಅಭಿನವ ; ಪು.: ೪೨೮ ; ಬೆ.:೨೫೦ ರು.)

(ಮೇ, ೩೧, ೨೦೦೯, ಭಾನುವಾರದ ಸಂಚಿಕೆ)

 

 Posted by at 9:00 PM
Jun 032009
 

(ಮೇ, ೩೦, ೩೧, ಮೇರಿಲ್ಯಾಂಡಿನ ರಾಕ್‍ವಿಲ್‍ನಲ್ಲಿ, ಕನ್ನಡ ಸಾಹಿತ್ಯ ರಂಗವು ನಡೆಸಿದ ವಸಂತೋತ್ಸವದಲ್ಲಿ ಭಾಗವಹಿಸಿಆನಂದಿಸಿದವರ ಕೆಲವು ಅನಿಸಿಕೆಗಳು ಇಲ್ಲಿವೆ. ನೀವೂ ಈ ಸಮ್ಮೇಳನದಲ್ಲಿ ಪಾಲ್ಗೊಂಡವರಾಗಿದ್ದರೆ, ನಿಮ್ಮ ಅನುಭವವನ್ನೇಕೆ ನಮ್ಮೊಡನೆ ಹಂಚಿಕೊಳ್ಳಬಾರದು?)  

 ಶ್ರೀ ರಾಜಗೋಪಾಲ್ ಮತ್ತು ನಟರಾಜ ಅವರೆ,
ಈ ನಾಲ್ಕನೆ ವಸಂತ ಸಾಹಿತ್ಯೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಕಾರ್ಯಗತ ಮಾಡಿದ್ದೀರಿ. ಪ್ರಕಟಿತ ಪುಸ್ತಕ ತುಂಬ ಆಕರ್ಷಕವಾಗಿ ಹೊರಬಂದಿದೆ. ಎರಡು ದಿವಸ ನಡೆದ ಎಲ್ಲ ಕಾರ್ಯಕ್ರಮಗಳು ತುಂಬ ಅಚ್ಚುಕಟ್ಟಾಗಿ ಮೂಡಿಬಂದು ನನಗೆ ತಿಳಿದಂತೆಎಲ್ಲರ ಮೆಚ್ಚುಗೆಯನ್ನು ಗಳಿಸಿದೆ. ಊಟ, ತಿಂಡಿಯ ವ್ಯವಸ್ಥೆಯೂ ಬಹಳ ತೃಪ್ತಿಕರವಾಗಿದ್ದಿತು. ಸಮ್ಮೇಳನಕ್ಕೆ ಬಹಳ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿದ್ದೀರಿ. ಒಟ್ಟಿನಲ್ಲಿ ನಾವೆಲ್ಲ ಎರಡು ದಿನಗಳ ಕನ್ನಡದ ಹಬ್ಬವನ್ನು ಬಹುವಾಗಿ ಆನಂದಿಸಿ, ಇನ್ನೂ ಅದೇ ಆನಂದದ ಗುನುಗಿನಲ್ಲೇ ಇದ್ದೇವೆ. ನಿಮಗೂ, ನಿಮ್ಮ ಜೊತೆ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳು.

ಕನ್ನಡಂ ಗೆಲ್ಗೆ!

ತ. ನಂ. ರಾಜಶೇಖರ  ನ್ಯೂಜೆರ್ಸಿ 

 *     *     *     *     *  

ಆತ್ಮೀಯ ನಟರಾಜ್ ಮತ್ತು ರಾಜಗೋಪಾಲ್ ಅವರಿಗೆ ನಮಸ್ಕಾರಗಳು.ವಸಂತ ಸಾಹಿತ್ಯೋತ್ಸವ ಜರುಗಿ ಇಂದಿಗೆ ಒಂಬತ್ತು ದಿನಗಳಾದವು. ಇನ್ನೂ ಆ ಸುಂದರ ಕ್ಷಣಗಳು ಮನದಲ್ಲಿಯೇ ಇವೆ. ಇನ್ನೂ ಅ2ಅಲ್ಲಿಯೇ ಇದ್ದಂತೆ ಅನ್ನಿಸುತ್ತಿದೆ. ಕಾರ್ಯಕ್ರಮಗಳೆಲ್ಲ ತುಂಬ ಚೆಂದವಾಗಿದ್ದವು. ಗೊತ್ತಿಲ್ಲದೊಂದೂರಿಗೆ ಹೊರಡುವಾಗ ಇದ್ದಂಥ ಯಾವುದೋ ಅವ್ಯಕ್ತ ಭಾವಗಳು ಅಲ್ಲಿದ್ದಾಗ ಮರೆಯಾಗಿದ್ದವು. ನಿಜವಾಗಿಯೂ ತಾಯ್ನಾಡಿಗೆ ಹೋಗಿ ಬಂದ ಭಾವ ಮರಳಿದಾಗ ಮುತ್ತಿಕೊಂಡಿತ್ತು. ಅಲ್ಲಿನ ಕಾರ್ಯಕ್ರಮಗಳು, ಊಟ-ವಸತಿ, ಎಲ್ಲವುಗಳ ವ್ಯವಸ್ಥೆ, ಎಲ್ಲವೂ ಎಷ್ಟು ಆರಾಮದಾಯಕವಾಗಿತ್ತೆಂದರೆ ಆಪ್ತಿಷ್ಟರ ಮನೆಯ ಸಮಾರಂಭಕ್ಕೆ ಹೋದಾಗಿನಷ್ಟು ಆಪ್ತವಾಗಿತ್ತು. ನಿಮ್ಮೆಲ್ಲರನ್ನು ಭೇಟಿಯಾದ ಖುಷಿಯಂತೂ ಖುಷಿಯೇ.ಕನ್ನಡ ಕಾದಂಬರಿ ಲೋಕದಲ್ಲಿ….ಹೀಗೆ ಹಲವು” ಆ ಪುಸ್ತಕದಲ್ಲಿ ತಮ್ಮಂಥ ಹಿರಿಯ ಲೇಖಕ/ಕಿಯರ ಬರಹಗಳ ಮಧ್ಯೆ ಅತೀ ಪುಟ್ಟವಳಾದ ನನ್ನ ಬರಹ ತೆರೆ  ತೆರೆದು ನೋಡಿಕೊಳ್ಳುವುದೊಂದು ಅತೀ ಖುಷಿ ನನಗೆ. ಅವಕಾಶವಿತ್ತ ತಮಗೆಲ್ಲ ನನ್ನ ವಂದನೆ. ತುಂಬ ಚೆಂದದ ಗಳಿಗೆಗಳವು. ಹೆಚ್ಚಿಗೆ ಹೇಳಲು ತೋಚುತ್ತಿಲ್ಲ. ಅಂಥ ಒಂದು ಗಳಿಗೆಯಲ್ಲಿ ನಾವೆಲ್ಲ ಖುಷಿಪಡಲು ಅವಕಾಶವಿತ್ತ ಸಾಹಿತ್ಯರಂಗಕ್ಕೆ ಹಾಗೂ ತಮ್ಮೆಲ್ಲರಿಗೆ ನನ್ನ ಅನಂತ ಧನ್ಯವಾದಗಳು.

ಶಾಂತಲಾ ಭಂಡಿ, ಕ್ಯಾಲಿಫೋರ್ನಿಯ. 

*     *     *     *     *  

What a wonderful performance by Kaveri!  Thoroughly enjoyed the literary event of KSR over the weekend.  The dramas, especially Radheya, top the list of real classic performing arts with a literary flair.  Other programs were also exceptionally good.  Hats off  to all the organizers.

Nalini Maiya 

 

*     *    *    *     *

 Dear Sri Nataraj, 

It was an excellent conference, a must for the growth of our language. A great Platform  for budding and seasoned writers and thinkers. We from Kannadakaliyona Appreciated the opportunity to participate and do our “aLilu” seva in comming out with our “kanndaKanda” newsletter. It has given us all a great impetus to Continue our work more vigor. Again wishing the very best to KSR and yourself.

 Best Regards

Phanindra 

 

 *     *     *     *     *  

 It was great focussed function everybody enjoyed it. Food was great no complaints.  It was Kaveri volunteers who helped us a lot. Basketfull of thanks to them.Children’s Kannada Kali program was great, but it was not opt.  Special thanks to Sound system team Prabhu & Nidhi, Stage team Jayaram & Shivu.  (I don’t know thier E-Mails, can anybody forward it to them?  It will be great). 

 Vallisha  

*     *     *     *     *

namaskara Nataraja,

 

Congratulation on a well deserved sleeplessness which one experiences after an exciting and successful event. The Sammelana was such a beautiful event that I was feeling sad when it was getting over.  Imagining such a program and planning and executing it so successfully requires a lot of hard work and passion. I congratulate everyone who contributed to the success. It was heart warming to experience the hospitality and love shown by KSR and Kaveri members. Thanks to you all for providing this opportunity for like minded Kannadigas to come togethar in a  very nice atmosphere.

Hats off indeed. It was like attending a favourite relative’s wedding where all the cousins enjoy each other’s company. I was touched by the love and affection that floated around the Sammelana organizers and attendees

All programs were of high quality. Thanks

 

Madhu Krishnamurthy

 

 

 

 Posted by at 1:54 AM