Apr 272009
 

ಇದೀಗ ಅಮೆರಿಕೆಯಲ್ಲಿ ವಸಂತ ಕಾಲಿಟ್ಟಿದೆ!  ಜೊತೆಗೇ ‘ಕನ್ನಡ ಸಾಹಿತ್ಯ ರಂಗ’ದ ನಾಲ್ಕನೆಯ ‘ವಸಂತ ಸಾಹಿತ್ಯೋತ್ಸವ’ ಸಾಹಿತ್ಯ ಪ್ರೇಮಿಗಳಿಗೆ ಮತ್ತೊಂದು ರಸದೌತಣ ನೀಡುವ ಸಲುವಾಗಿ ನಮ್ಮೆಡೆಗೆ ಧಾವಿಸಿ ಬರುತ್ತಿದೆ!  ನಿಮಗೆ ಗೊತ್ತಿರುವಂತೆ ಮೇ ತಿಂಗಳು ೩೦ ಮತ್ತು ೩೧ರಂದು ಮೇರಿಲ್ಯಾಂಡಿನ ರಾಕ್‍ವಿಲ್ ಎಂಬ ಸ್ಥಳದಲ್ಲಿ ಶೇಡಿ ಗ್ರೊವ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ ಈ ಸಮಾರಂಭ.   ಸಾಹಿತ್ಯೋತ್ಸವ ಅಂದ ಮೇಲೆ ‘ಸಾಹಿತ್ಯ ಗೋಷ್ಠಿ’ ಇರಲೇಬೇಕು! ಅಂತ ನೀವು ಯೋಚಿಸುತ್ತಿದ್ದರೆ …”ಕರೆಕ್ಟ್”!  ಊಟ ಅಂದ ಮೇಲೆ ಅನ್ನ ಇರಲೇಬೇಕು ಅಂದ ಹಾಗಾಯಿತು ಇದು! (ಅಮೆರಿಕೆಯಂತಹ ದೇಶದಲ್ಲಿ ಅನ್ನ ಇಲ್ಲದೆ ಇರುವ ಊಟವೂ ಕಾಮನ್, ಬಿಡಿ!)

ಕನ್ನಡ ಪ್ರೇಮಿಗಳಿಗೆ, ಅದರಲ್ಲೂ ಬರವಣಿಗೆ ಎಂಬ ಹವ್ಯಾಸವನ್ನು ರೂಢಿಸಿಕೊಂಡಿರುವವರಿಗೆ ಇದೊಂದು ಸುವರ್ಣಾವಕಾಶ!  ನಿಮ್ಮ ಕವನ, ಪ್ರಬಂಧ ಅಥವಾ ಬೇರೆ ಯಾವುದೇ ಕೃತಿಯನ್ನು ಸಹೃದಯಿ ಪ್ರೇಕ್ಷಕರ ಸಮಕ್ಷಮದಲ್ಲಿ ಓದಿ, ಇತರ ಸಾಹಿತ್ಯ ಪ್ರೇಮಿಗಳ ವಾಚನವನ್ನು ಕೇಳಿ ಸಂತೋಷಿಸುವ ಈ ಅಮೋಘ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂಬ ಕಳಕಳಿಯ ಕೋರಿಕೆ ನಮ್ಮದು.

ಪ್ರತಿಯೊಬ್ಬರಿಗೂ ಏಳು ನಿಮಿಷಗಳ ಕಾಲಾವಕಾಶ ಕೊಡಲಾಗುತ್ತದೆ.  ಭಾಗವಹಿಸುತ್ತಿರುವವರು ತಮ್ಮ ಸ್ವಂತ ಕೃತಿಯನ್ನು ಮಾತ್ರ ಓದಬಹುದು.  ದಯವಿಟ್ಟು ಮೇ ೧೫ರ ಒಳಗೆ  ನೀವು ಓದಬೇಕೆಂದಿರುವ ಕೃತಿಯನ್ನು ನಮಗೆ ಈಮೇಲ್ ಮೂಲಕ ಕಳಿಸಿ ಕೊಡಿ.  ಸಾಹಿತ್ಯ ಗೋಷ್ಠಿಯಲ್ಲಿ ವಾಚಿಸಲಿರುವ ಕೃತಿಗಳ ಆಯ್ಕೆ ಪ್ರಾಯೋಜಕರಿಗೆ ಸೇರಿದ್ದು.  ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:

ನಳಿನಿ ಮೈಯ nmaiya@gmail.com
ಮಧುಕಾಂತ್ ಕೃಷ್ಣಮೂರ್ತಿ  madhukanthk@yahoo.com  

 Posted by at 11:01 PM