Nov 252012
 

ಮೈ.ಶ್ರೀ. ನಟರಾಜ

೨೦೧೩ ರ ಮೇ ಮಾಸದಲ್ಲಿ ಹ್ಯೂಸ್ಟನ್ ನಗರದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ರಂಗದ ವಸಂತೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಬರಲು ಶ್ರೀ. ಕೆ.ವಿ. ತಿರುಮಲೇಶ್ ಅವರು ನಮ್ಮ ಆಹ್ವಾನವನ್ನು ಒಪ್ಪಿಕೊಂಡಾದಮೇಲೆ ಅವರ ಎರಡು ಕವಿತೆಗಳನ್ನು ನಾನು "ಕೆಂಡ ಸಂಪಿಗೆ" ಜಾಲತಾಣದಲ್ಲಿ ಓದಿದೆ. ಓದಿದೊಡನೆಯೇ ಅವು ನನಗೆ ಪ್ರಿಯವಾದವು, ಹಾಗಾಗಿ ಆ ಕವಿತೆಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ ಮೂಲ ಕವಿಯೊಂದಿಗೆ ಹಂಚಿಕೊಂಡೆ. ಅನುವಾದವನ್ನು ಅವರು ಮೆಚ್ಚಿಕೊಂಡರು, ಅಷ್ಟೇ ಅಲ್ಲ, ಮೂಲ ಕವಿತೆಗಳನ್ನೂ ಅನುವಾದಗಳನ್ನೂ ಕನ್ನಡ ಸಾಹಿತ್ಯ ರಂಗದ ಜಾಲತಾಣದಲ್ಲಿ ಪ್ರಕಟಿಸಲು ತಿರುಮಲೇಶರನ್ನು ನಾನು ಕೇಳಿಕೊಂಡಾಗ ಸಂತೋಷದಿಂದಲೇ ಒಪ್ಪಿಗೆ ಕೊಟ್ಟಿದ್ದಾರೆ. ನಮ್ಮ ಓದುಗರೊಡನೆ ಹಂಚಿಕೊಳ್ಳುತ್ತಿದ್ದೇನೆ, ಇದೋ ಸ್ವೀಕರಿಸಿ.

 Posted by at 12:32 AM
Nov 252012
 

ಕೆ.ವಿ.ತಿರುಮಲೇಶ್

ಮನೆ ಬಿಟ್ಟವರಿದ್ದಾರೆ ಮಠ ಬಿಟ್ಟವರಿದ್ದಾರೆ
ತತ್ವಜ್ಞಾನದ ಮೋಹದಲ್ಲಿ
ದೇಶ ತೊರೆದವರು ವಿಷ ಕುಡಿದವರು
ಅಮೃತದಂತೆ ಮದ್ಯವನ್ನೂ
ವ್ಯಸನವಾಗಿಸಿಕೊಂಡವರು ಹಾಗೂ
ತಬ್ಬಿಕೊಂಡವರು
ಅಪ್ಸರಸಿಯರಂತೆ ಸೂಳೆಯರನ್ನೂ

ಏನೀ ಆಕರ್ಷಣೆ ಎಂದು ನಾನೂ
ನಡೆದು ನೋಡುತ್ತೇನೆ
ಒಂದಷ್ಟು ದೂರ
ಹರಡಿದ ಮಬ್ಬಲ್ಲದೆ ಇನ್ನೇನೂ
ಕಾಣಿಸುವುದಿಲ್ಲ
ನನಗೋ ಸಮೀಪದೃಷ್ಟಿ
ಯಾರೂ ಬಿಟ್ಟ ದಾರಿಗುರುತುಗಳಿಲ್ಲ
ಇದ್ದರೂ ಅವನ್ನು ಬಳಸುವಂತಿಲ್ಲ
ಇಷ್ಟು ಮಾತ್ರ ತಿಳಿದಿದ್ದೇನೆ:
ತತ್ವಜ್ಞಾನ ಹೀಗೆಯೇ ಆವಾಗಲೂ ಯಾವಾಗಲೂ
ದೇಶಭ್ರಷ್ಟ!

ಕಾವ್ಯವೂ ಅರ್ಧ ಹಾಗೆಯೇ
ಇನ್ನರ್ಧ ಹೀಗೆ
ಕವಿ ನಡೆಯುತ್ತಾನೆ ಬರಿಜೇಬಿನಲ್ಲೂ ಮಹಾ
ರಾಜನ ಹಾಗೆ
ಎಲ್ಲರನ್ನೂ ಕೂಡಿಕೊಂಡೇ
ಕಾಡುಮೇಡುಗಳಲ್ಲಿ ಮತ್ತು
ವಾರದ ಸಂತೆಗಳಲ್ಲಿ ಒಬ್ಬನೇ ಆದರೂ ಬರೀ
ಒಬ್ಬನೂ ಅಲ್ಲ

ದೇವಯಾನಿ ಶರ್ಮಿಷ್ಠ ಮತ್ತಿನ್ನು ಯಾರು ಆ
ಅಪ್ಸರಸಿ ಸರಸಿ ಯವನೀ ರಮಣಿ ಕೂಡ
ಅವನಿಗಿಷ್ಟ

ಇತ್ತ ಈ ಫ಼ಿಲಾಸಫ಼ಿಗಾದರೆ ಮೈಮನಸ್ಸಿಗೆ ಗಾಯ
ಆದರೂ ಅದೆಂಥ ಮೋಹ ಎಂದಿಗೂ
ಪರವಶತೆ ಬಿಡದ ಮನದ ಮಾಯ.

 Posted by at 12:30 AM
Nov 252012
 

ಕೆ.ವಿ.ತಿರುಮಲೇಶ್

If I am not for myself, who will be for me?
If I am not for myself only, what am I?
If not now, when?
Talmudic saying

ಎಲ್ಲರಿಗೆ ನಾನಿದ್ದೇನೆ ನನಗೆ ಯಾರಿದ್ದಾರೆ
ಆಥವ ಹಾಗೆ ಯೋಚಿಸುವುದೂ ಕೂಡ ಪಾಪ
ಎಲ್ಲಿ ನಾನು ಕೊನೆಗೊಳ್ಳುತ್ತೇನೆ ಎಲ್ಲಿ ಇನ್ನೊಬ್ಬ
ಆರಂಭಗೊಳ್ಳುತ್ತಾನೆ ನನಗೆ ಗೊತ್ತಿಲ್ಲ
ಎಲ್ಲಿ ಸ್ವಾರ್ಥ ಮುಗಿಯುತ್ತದೆ ಎಲ್ಲಿ ನಿಸ್ವಾರ್ಥ
ಸುರುವಾಗುತ್ತದೆ ನನಗೆ ಗೊತ್ತಿಲ್ಲ
ಎಲ್ಲಿ ಮಾತು ತಡೆಯುತ್ತದೆ ಮೌನ
ಮೊದಲಾಗುತ್ತದೆ ಅದೂ ಗೊತ್ತಿಲ್ಲ
ಎಲ್ಲಿ ವೈರುಧ್ಯಗಳು ಪರಸ್ಪರ ಎದುರಾಗಿ
ಗುರುತಿಲ್ಲದಂತೆ ಸರಿದುಹೋಗುತ್ತವೆ

ಒಂದು ಹೂವಿಗೂ ಗೊತ್ತಿರುತ್ತದೆ
ಯಾವಾಗ ಅರಳಬೇಕು ಯಾವಾಗ ದಳ
ಉದುರಬೇಕು ನಾನೋ ತೀರ
ವ್ಯವಹಾರಶೂನ್ಯ ಜನ್ಮತಃ ಯಾವುದೋ ಕೊರತೆ
ಆದರೂ ಸ್ವಯಂ ಶೂನ್ಯನಾಗಲು ನಾನೂ
ಬಯಸಿದ್ದಿದೆ ಓ ದೈವವೇ
ಶೂನ್ಯಸ್ಥಲವೇ ಇಲ್ಲದ ಲೋಕವ ಮಾಡಿ
ಇರಿಸಿದೆ ನನ್ನನ್ನಿಲ್ಲಿ ಈ ಮಬ್ಬಿನಲ್ಲೇ
ದಿಕ್ಕೆಂದು ಹೊರಟು ದಿಗ್ಭ್ರಮೆಗೊಂಡೆ ನಾನು
ನೀರ ಮೇರೆಯ ಹುಡುಕುವ ಮೀನಿನಂತೆ
ಸಿಕ್ಕ ಸಿಕ್ಕಲ್ಲಿ ಸಿಗಹಾಕಿಕೊಂಡೆ

ಗೋಡೆಯ ಮೇಲೆ ಬಿದ್ದ ನೆರಳೇ ನೀನೆಷ್ಟು
ನನ್ನದು ನಾನೆಷ್ಟು ನಿನ್ನದು ಎಂದು ಕೇಳಲೇ
ಈ ದೈತ್ಯಾಕಾರವನ್ನೇ ನಾನೆಂದು
ಸಂಭ್ರಮಿಸಲೇ
ಸಣಕಲ ನಾನು ಆದರೂ ಎಲೆ ಅಸ್ತಮಯ
ಸೂರ್ಯನೇ
ಸಕಲ ವಸ್ತುಗಳ ಮೇಲೆ ಸುವರ್ಣವರ್ಣವ ಸುರಿದಿ
ನನ್ನ ಮುಖದ ಮೇಲೂ ಇದೀಗ
ನನ್ನ ಮುಖವಲ್ಲ ನಿನ್ನದೇ
ನಾಳೆ ಮುಂಜಾನೆ ಉದಿಸುವಿ ನೀನು
ನಿನಗೋಸ್ಕರ ಕಾಯುವ ಜೀವಕೋಟಿಗಳಿದ್ದಾವೆ
ನನಗೋಸ್ಕರ ಯಾರಿದ್ದಾರೆ
ಮುಂಜಾನೆ ನನಗೆ ಎಚ್ಚರವಾಗಬೇಕೆಂದೇ ಇಲ್ಲ
ನಿದ್ರಿಸದೇ ಅದೆಷ್ಟೊ ವರ್ಷಗಳಾಗಿವೆ
ರೆಪ್ಪೆಗಳು ಮೇಲೆ ಮಣಭಾರ ಕುಳಿತಂತೆ
ತೂಕಡಿಸುತ್ತಿವೆ ಲೋಕದ ಭಾರವ ತಾವೆ
ಹೊತ್ತುಕೊಂಡಂತೆ ಇನ್ನೂ ಭ್ರ್‍ಅಮಿಸುತ್ತವೆ ಇದು
ಭ್ರಮೆಯೆಂದು ತಿಳಿದೂ
ಆದರೂ ಮುಚ್ಚಲಾರವು ಅವು
ಕನಸುಗಳ ಭಯಕ್ಕೆ
ಒಂದು ಕ್ಷಣ ನಿಲ್ಲು ಸಂಜೆಯ ಬೆಳಕೇ
ನಿನ್ನ ತಾಟಸ್ಥ್ಯದಲಿ ನನ್ನ ಸ್ವೀಕರಿಸು.

 Posted by at 12:22 AM
Nov 252012
 

Original Poem in Kannada “ninna taaTasthyadali nanna” By Prof. K.V. Tirumalesh
English Translation by Dr. M.S. Nataraja

I am there for all, who is there for me?
It is a sin even to think like that, maybe
I do not know where “I” end
And where the “others” begin
Or, where selfishness ends
And selflessness begins
Nor, where speech ends
And silence begins.
All opposites seem to encounter, clash
And slide past each other in silence
Leaving no clues behind

Even a flower knows
When to unfurl, when to whither
When to drop its petals and fall
I am the one, clueless by birth
Inadequate, suffering from dearth
Longing to merge into ‘nothing’ –but alas!
Even my universe is devoid of the void!
Having been thrown here in this misty haze
Have lost my bearings in this startling daze
Like a fish looking for the water’s edge
Caught in a net that forms a wedge
Oh, Shadow on the wall, can you tell me

And how much of me, are you?
Should I rejoice that I am gigantic like you?
I am tiny and thin, and yet, Oh setting Sun,
You poured the golden light
On everything on earth, including my face
Like, it is no longer my face but yours.
You will rise tomorrow early in the morning
And billions of lives await your arrival.
Who shall wait for me, and who knows --

If I will wake up at all, in the morning?
Haven’t slept for ages, eyelids are swollen
Heavy like a ton of weight, as though
The entire wait of this universe
Rests on my restless sleepy eyelids
Pretending -- despite knowing that
It is mere delusion!
The eyelids dare not shut and sleep
Lest they dream the dreadful dreams
Oh, evening light, freeze, just for a moment
Accept me, in your stillness.

 Posted by at 12:14 AM